Sunday, July 1, 2012

yava mohana murali kareyitu

Lyrics: Gopal Krishna Adiga

ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು !!

ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂದನ ಚುಂಬನ !!
ಬಯಕೆ ತೋಟದ ಬೇಲಿಯೊಳಗೆ ಕರಣಗಳದೀ ರಿಂಗಣ

ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾಡಿದೆ
ಮೊಳೆಯದಳೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ

ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ವಿವಶವಾಯಿತು ಪ್ರಾಣ ಆಹ್ .... ವಿವಶ ವಾಯಿತು ಪ್ರಾಣ
ಪರವಶವು ನಿನ್ನೀ  ಚೇತನ
ವಿವಶವಾಯಿತು ಪ್ರಾಣ ಆಹ್ 
ಪರವಶವು ನಿನ್ನೀ  ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಗೆ ತುಡಿವುದೇ ಜೀವನ

ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

Ede thumbi hadidenu ...

Lyrics: G S Shivarudrappa

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು  ಕೇಳಿದಿರಿ ಅಲ್ಲಿ ನೀವು !!
ಎದೆ ತುಂಬಿ ಹಾಡಿದೆನು ಅಂದು ನಾನು 

ಇಂದು ನಾ ಹಾಡಿದರು ಅಂದಿನಂತೆ ಕುಳಿತು
ಕೇಳುವಿರಿ ಸಾಕೆನಗೆ ಅದುವೇ ಬಹುಮಾನ  !!
ಹಾಡು ಹಕ್ಕಿಗೆ ಬೇಕೇ !!
ಬಿರುದು ಸನ್ಮಾನ
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು  ಕೇಳಿದಿರಿ ಅಲ್ಲಿ ನೀವು
ಎದೆ ತುಂಬಿ ಹಾಡಿದೆನು ಅಂದು ನಾನು 

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ  !!

ಕೇಳುವವರಿಹರೆಂದು .... ಆ .. ಕೇಳುವವರಿಹರೆಂದು
ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು !!
ನನಗಿಲ್ಲ ಚಿಂತೆ
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು  ಕೇಳಿದಿರಿ ಅಲ್ಲಿ ನೀವು
ಎದೆ ತುಂಬಿ ಹಾಡಿದೆನು ಅಂದು ನಾನು

Krishna ni begane baro

Composer: Vyasathirtha (15th Century)

ಕೃಷ್ಣ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾದೆಯ ಕೂಗು ನೀ ಕೇಳಲಿಲ್ಲವೇನು !!
ವಾಸುದೆವ ವೇಣುಗೋಪಾ ಬಾ .. . ಕೃಷ್ಣ  ಬಾ ... ನೀ ಬೇಗ ಬಾ

ಕೃಷ್ಣ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ 
ಈ ರಾದೆಯ ಕೂಗು ನೀ ಕೇಳಲಿಲ್ಲವೇನು
ವಾಸುದೆವ ವೇಣುಗೋಪಾ ಬಾ .. . ಕೃಷ್ಣ  ಬಾ ... ನೀ ಬೇಗ ಬಾ

ಆತ್ಮವು ನೀನೇ ಜೀವವು ನೀನೇ ನನ್ನೆದೆ ಹಾಡು ನೀನೇ ...
ಹಾಡಿನ ಪ್ರಾಣವು ನೀನೇ ...
ಪ್ರೀತಿಯ ರಾದೆ ಪ್ರತಿಕ್ಷಣ ಕಾದೆ
ಏನನು ಮಾಡಲಿ ನಾನು ..ಯಾರಿಗೆ ಹೇಳಲಿ ಇನ್ನು
ಗೋಪಾಲ ಗೋಪಿ ಕೃಷ್ಣ ಮಾಯಾವಿ ಮಾಯಾ  ಕೃಷ್ಣ
ನೀನಿರದೇ ನಾನಿಲ್ಲ ನೀ ಬರದೆ ಬಾಳಿಲ್ಲ
ಮಾದವ ಮುಕುಂದನೇ ಬಾ ಬೇಗ ಬಾ ನೀ ಬೇಗ ಬಾ

ಕೃಷ್ಣ ನೀ ಬೇಗನೆ ಬಾರೋ 
ಶ್ರೀ ಕೃಷ್ಣ ನೀ ಬೇಗನೆ ಬಾರೋ 

ಜನನವು ನೀನೇ ಮರಣವು ನೀನೇ
ನನ್ನೆದೆ ದ್ಯಾನವು ನೀನೇ ...
ದ್ಯಾನದ ಪ್ರಣತಿಯು ನಾನೆ
ಬೆಳಗುವೆ ದೀಪ ತೋರಿಸು ರೂಪ
ಎಂದಿಗೆ ಬರುವೆಯು  ನೀನು
ಎನ್ನುತ ಕಾಯುವೆ ನಾನು
ಗೋಪಾಲ ಗೋಪಿ ಕೃಷ್ಣ ಮಾಯಾವಿ ಮಾಯಾ  ಕೃಷ್ಣ 
ನೀನಿರದೇ ನಾನಿಲ್ಲ ನೀ ಬರದೆ ಬಾಳಿಲ್ಲ 
ಕೇಶವ ಜನಾರ್ಧನ ಬಾ ... ಬೇಗ ಬಾ ನೀ ಬೇಗ ಬಾ



ಕೃಷ್ಣ ನೀ ಬೇಗನೆ ಬಾರೋ 
ಶ್ರೀ ಕೃಷ್ಣ ನೀ ಬೇಗನೆ ಬಾರೋ 
ಈ ರಾದೆಯ ಕೂಗು ನೀ ಕೇಳಲಿಲ್ಲವೇನು !!
ವಾಸುದೆವ ವೇಣುಗೋಪಾ ಬಾ .. . ಕೃಷ್ಣ  ಬಾ ... ನೀ ಬೇಗ ಬಾ


kenakutide ninna kannota lyrics ..

ಚಿತ್ರ : ಆಸೆಗೊಬ್ಬ ಮೀಸೆಗೊಬ್ಬ
ಹಾಡಿದವರು : SPB

ಕೆಣಕುತಿದೆ ನಿನ್ನ ಕಣ್ಣೋಟ  ...
ಕುಣಿಸುತಿದೇ ನಿನ್ನ ಕಣ್ಣಾಟ
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೆನಿಗಾ  ??
ಕೆಣಕುತಿದೆ ನಿನ್ನ ಕಣ್ಣೋಟ  ...

ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ   !!
ನೀ ನುಡಿದರು ಸೊಗಸು ಮೌನವು ಸೊಗಸು ಎಲ್ಲ  ಸಂಗೀತವೇ ....

ಕೆಣಕುತಿದೆ ನಿನ್ನ ಕಣ್ಣೋಟ

ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೆನಿಗಾ  ??
ಕೆಣಕುತಿದೆ ನಿನ್ನ ಕಣ್ಣೋಟ  ...



ಎಂದು ಕಂಡ ಅಂದ ಅಂದ  ನಿನ್ನದು
ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು  !!
ಇದು ಸಾವಿರ ಜನುಮ ಜೊತೆಯಲಿ ನಾವು ಕಂಡ ಆನಂದವೂ ......

ಕೆಣಕುತಿದೆ ನಿನ್ನ ಕಣ್ಣೋಟ  ...

ಕುಣಿಸುತಿದೇ ನಿನ್ನ ಕಣ್ಣಾಟ
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೆನಿಗಾ  ??
ಕೆಣಕುತಿದೆ ನಿನ್ನ ಕಣ್ಣೋಟ  ...